


Always remember to put your parents right there in your heart ….
13 ಏಪ್ರಿಲ್ 1919- ಜಲಿಯನ್‍ವಾಲಾ ಭಾಗ್‍ನ ಕರಾಳ ಹತ್ಯಾಕಾಂಡದ ಮೂಕ ಸಾಕ್ಷಿಗಳು
”I think it was quite possible that I could have dispersed the crowd without firing but they would have come back again and laughed, and I would have made, what I consider, a fool of myself.”
ಪ್ರಪಂಚದಲ್ಲಿ ಬಹುಶಃ ಬಡವ, ಶ್ರೀಮಂತ ಎಂಬ ಭೇದವಿಲ್ಲದೆ ಎಲ್ಲರೂ ಅನುಭವಿಸುವಂತಹ ಒಂದೇ ಒಂದು ಆಸ್ತಿ ಎಂದರೆ ಅದು ’ಕನಸುಗಳು’ ಮಾತ್ರ. ಕನಸು ಕಾಣೋಕೆ ಯಾವ ದೊಣೆನಾಯಕನ ಅಪ್ಪಣೆ ಪಡೆಯಬೇಕಾಗಿದೆ ಹೇಳಿ? ದಿನವಿಡೀ ಬೆವರು ಸುರಿಸಿ ದುಡಿದು, ಸಂಜೆ ಮನೆಗೆ ಬಂದು ಹಾಸಿಗೆ ಮೇಲೆ ಬಿದ್ಕೊಂಡು ನಿದ್ರಾದೇವಿ ಆವರಿಸಿಕೊಂಡ್ರೆನೇ ಅಂದಿನ ದಿನ ಸಾರ್ಥಕ ಅನ್ಸೋದು. ನಂತರ ತೆರೆದುಕೊಳ್ಳುತ್ತದೆ ಕನಸುಗಳ ಮಾಯಾಪ್ರಪಂಚ. ಆ ಪ್ರಪಂಚದಲ್ಲಿ ನಮ್ಮದೇ ಆಧಿಪತ್ಯ. ವಾಸ್ತವ ಜಗತ್ತಿನಲ್ಲಿ ನಮಗೆ ಸಾದ್ಯವಾಗದ, ಕೈಗೆಟುಕದ ಹಲವಾರು ಆಸೆಗಳನ್ನು ಕನಸಿನಲ್ಲಿ ಸುಲಭವಾಗಿ ಈಡೇರಿಸಿಕೊಳ್ಳಬಹುದು.
ಕನಸಿನ ವಿಧಗಳೋ, ಹತ್ತು ಹಲವು. ಒಳ್ಳೆಯ ಕನಸು, ಕೆಟ್ಟ ಕನಸು, ಹಗಲುಗನಸು, ಸವಿಗನಸು ಇತ್ಯಾದಿ ಇತ್ಯಾದಿ. ಕನಸುಗಳೇ ಇಲ್ಲದ ಜೀವನವನ್ನ ಊಹಿಸಿಕೊಳ್ಳಲೂ ಆಗೋದಿಲ್ಲ ಅಲ್ವೇ? ಹಲವರಿಗೆ ಹಲವು ವಿಧಗಳಲ್ಲಿ ಕನಸುಗಳು ಬೀಳುತ್ತವೆ. ಇನ್ನೂ ತಾಯಿಯ ಗರ್ಭದಲ್ಲಿರುವ ಮಗುವಿನಿಂದ ಹಿಡಿದು ಇವತ್ತೋ ನಾಳೆಯೋ ಎಂಬಂತಿರುವ ಹಿರಿಜೀವಗಳವರೆಗೆ ಎಲ್ಲರೂ ಕನಸು ಕಾಣುತ್ತಾರೆ. ಮಕ್ಕಳಿಗೆ ಟಾಮ್ ಅಂಡ್ ಜರ್ರಿಯ ಜೊತೆ ಆಟವಾಡುವ ಕನಸು, ಯೌವ್ವನಕ್ಕೆ ಕಾಲಿಟ್ಟವರಿಗೆ ನಲ್ಲ-ನಲ್ಲೆಯರ ಕನಸು, ಡಿಗ್ರಿ ಮುಗಿಸಿರುವವರಿಗೆ ಉದ್ಯೋಗದ ಕನಸು. ಕೆಲವರಿಗೆ ಮೊದಲ ಬೈಕ್ ನ ಕನಸು ಬಿದ್ದರೆ, ಇನ್ನೂ ಕೆಲವರಿಗೆ Mercedez Benz ನದ್ದೇ ಕನಸುಗಳು. ಇಷ್ಟಕ್ಕೂ ಕನಸುಗಳು ಯಾಕೆ ಬೀಳುತ್ತವೆ? ಇದಂತೂ ಇನ್ನೂ ಉತ್ತರವಿಲ್ಲದ ಪ್ರಶ್ನೆಯಾಗಿಯೇ ಉಳಿದಿದೆ.
“ಕನಸುಗಳನ್ನು ಕಾಣಿ ಮತ್ತು ಅದನ್ನು ಸಾಧಿಸುವುದಕ್ಕಾಗಿ ಕಷ್ಟಪಟ್ಟು ದುಡಿಯಿರಿ” ಎಂದು ನಮ್ಮ ಮಾಜಿ ರಾಷ್ಟ್ರಪತಿ ಡಾ|| ಎ.ಪಿ.ಜೆ.ಅಬ್ದುಲ್ ಕಲಾಮ್ ರವರು ಯಾವಾಗಲೂ ಹೇಳ್ತಾ ಇರ್ತಾರೆ. ಮಾನವನ ಇಂದಿನ ಬಳವಣಿಗೆಗೆ ಕನಸುಗಳೇ ಮೂಲ ಕಾರಣ ಎಂದರೆ ಖಂಡಿತ ತಪ್ಪಾಗಲಾರದು. ಹಾಗೆಂದು ಬರೀ ಕನಸುಗಳನ್ನು ಕಾಣುತ್ತಾ ಕುಳಿತರೆ ಸಾಲದು. ಅದನ್ನು ಸಾಧಿಸುವ ದಿಸೆಯಲ್ಲಿ ಮುನ್ನುಗ್ಗಬೇಕು. ಒಬ್ಬ ಮಹಾನ್ ವ್ಯಕ್ತಿಗೂ, ಒಬ್ಬ ಸಾಮಾನ್ಯ ವ್ಯಕ್ತಿಗೂ ಇರುವ ವ್ಯತ್ಯಾಸ ಇದೇ. ಯಾವುದೇ ಒಂದು ಕೆಲಸ ಮಾಡಬೇಕಾದರೂ ಅದರ ಬಗ್ಗೆ ಒಂದು ಸ್ಪಷ್ಟ ಕಲ್ಪನೆಯಿರಬೇಕು, ಕನಸು ಕಾಣಬೇಕು. ಆಗಲೇ ಅದು ಯಶಸ್ವಿಯಾಗಿ ಪೂರ್ಣಗೊಳ್ಳಲು ಸಾದ್ಯ.
“Dreams pass into the reality of action. From the actions stems the dream again; and this interdependence produces the highest form of living”
-ಅನಾಮಿಕ
“Every great dream begins with a dreamer. Always remember, you have within you the strength, the patience, and the passion to reach for the stars to change the world”
-ಹ್ಯಾರಿಯಟ್ ಟಬ್ ಮನ್
“The work goes on, the cause endures, the hope still lives and the dreams shall never die”
-ಎಡ್ವರ್ಡ್ ಕೆನೆಡಿ
ನಮ್ಮ ರವಿಚಂದ್ರನ್ ರವರು ತಮ್ಮ ಪ್ರತಿ ಚಿತ್ರಕ್ಕೂ ’ಕನಸುಗಾರನ ಒಂದು ಕನಸು’ ಎಂಬ subtitle ಕೊಡ್ತಾರೆ. ಓ ಕನಸೇ, ನಿನ್ನ ಮಹಿಮೆ ಅಪಾರ, ಕಲ್ಪನಾತೀತ! ಕನಸುಗಳಲ್ಲಿ ಮುಳುಗಿ ತೇಲುವುದನ್ನು ಯಾರೂ ಮರೀಬೇಡಿ. ಅದಕ್ಕೇನೂ ಕಾಸು ಕೊಡಬೇಕಾಗಿಲ್ವಲ್ಲಾ
ಮೊನ್ನೆ ದಿನ ಟೀವಿ ನೋಡ್ತಾ ಇದ್ದೆ. ಮಾವೋವಾದಿಗಳ ಅಟ್ಟಹಾಸಕ್ಕೆ 76 CRPF ಯೋಧರು ಬಲಿಯಾದ ಸುದ್ದಿ ನೋಡಿ ಎದೆ ಝಲ್ಲೆನಿಸಿತು. ಛತ್ತೀಸ್‌ಗಢದ ದಂತೇವಾಡದಲ್ಲಿ ನಡೆದ ಈ ಘಟನೆ ಮನುಷ್ಯತ್ವಕ್ಕೆ ಬಗೆದ ಅಪಚಾರ ಅಂತನೇ ಹೇಳಬಹುದು. ಎತ್ತ ಸಾಗ್ತಿದೆ ನಮ್ಮ ದೇಶ? ದಿನ ಬೆಳಗಾದ್ರೆ ಸಾಕು ಯಾವುದೋ ಒಂದು ಭಯೋತ್ಪಾದಕ ದಾಳಿ- ಸಾವು ನೋವು. ಮಾವೋ, ಉಲ್ಫಾ, ಲಷ್ಕರ್ ಇತ್ಯಾದಿ ಹಲವು ಗುಂಪುಗಳು! ಇವ್ರು
ಮಾಡೋ ಕೆಲ್ಸಾ ಮಾತ್ರ ಒಂದೇ- ಜನರನ್ನ ಬೇಕಾಬಿಟ್ಟಿ ಕೊಲ್ಲೋದು. ಯಾಕ್ ಈ ರೀತಿ ಆಗ್ತಾ ಇದೆ? ಇಲ್ಲಿ ಯಾರೂ ಹೇಳೋರು-ಕೇಳೋರು ಇಲ್ವಾ? Human rights ಬಗ್ಗೆ ಪಿಟೀಲು ಕುಯ್ಯೋ NGO, Pseudo secular ಗಳು ಇದರ ಬಗ್ಗೆ ಚಕಾರ ಎತ್ತೋದಿಲ್ಲ. ತಮಗೆ convinient ಆಗಿರೋ ವಿಷಯಗಳ ಬಗ್ಗೆ ಮಾತ್ರ ಅವ್ರು ಮಾತಾಡ್ತಾರೆ. ಈ ದೇಶದಲ್ಲಿ ಒಬ್ಬ ಭಯೋತ್ಪಾದಕನ ಜೀವಕ್ಕಿರೋ ಬೆಲೆ ನಮ್ಮ ಸೈನಿಕರಿಗೆ ಇಲ್ಲದಂತಾಗಿದೆ. ಮಾವೋವಾದಿಗಳ ವಿಷಯಕ್ಕೇನೆ ಬರೋಣ. ಇತಿಹಾಸದ ಪುಟಗಳನ್ನೊಮ್ಮೆ ತಿರುವಿ ಹಾಕಿದಾಗ, 1967ರಲ್ಲಿ ಪಶ್ಚಿಮ ಬಂಗಾಳದ ’ನಕ್ಸಲ್ ಬರಿ’ ಎಂಬ ಗ್ರಾಮದಲ್ಲಿ ಸಾಮಾಜಿಕ ಅಸಮಾನತೆಗಳ ವಿರುದ್ದವಾಗಿ ರೂಪುಗೊಂಡ Naxalism ಅನ್ನೋ ಈ ಚಳುವಳಿ ಜನ್ಮ ತಾಳಿತು. ಪ್ರಾರಂಭದಲ್ಲಿ ತಾನು

ನಂಬಿದ Ideology ಗಾಗಿ ನ್ಯಾಯಯುತವಾಗಿ ಹೋರಾಟ ನಡೆಸುತ್ತಿದ್ದ Naxaliteಗಳು ದಾರಿ ತಪ್ಪಿ ಹಲವು ದಶಕಳೇ ಕಳೆದಿವೆ. ಎಡಪಂಥೀಯ[Leftist] policy ಗಳನ್ನೇ ತನ್ನ ಮೂಲಭೂತ ಅಂಶವಾಗಿಟ್ಟುಕೊಂಡಿರುವ ಈ ಸಂಘಟನೆ ಇತ್ತೀಚಿನ ವರ್ಷಗಳಲ್ಲಿ ಹಲವಾರು ದಳಗಳಾಗಿ ಚದುರಿಹೋಗಿದೆ. ಬೆಲೆ ಕಳೆದುಕೊಂಡಿರುವ Lefist Ideology ಯನ್ನ ಜನರ ಮೇಲೆ ಹೇರಲು ಎಂತಹ ಕೆಲಸ ಮಾಡಲೂ ಈ ಸಂಘಟನೆ ಹೇಸೋದಿಲ್ಲ ಅನ್ನೋದು ದಂತೇವಾಡದಲ್ಲಿ ನಡೆದ ಮಾರಣಹೋಮದಿಂದ ಮತ್ತೊಮ್ಮೆ ಸಾಬೀತಾಗಿದೆ. ಇವರ ಅಟ್ಟಹಾಸಕ್ಕೆ ಕಡಿವಾಣ ಹಾಕಲೇಬೇಕಾದ ಸಮಯ ಬಂದಿದೆ. ಇಲ್ಲದೇ ಹೋದಲ್ಲಿ ಮುಂದೊಂದು ದಿನ ಇಡೀ ಭಾರತವನ್ನೇ ತಮ್ಮ ಕಪಿಮುಷ್ಟಿಯಲ್ಲಿಟ್ಟುಕೊಂಡರೂ ಆಶ್ಚರ್ಯವಿಲ್ಲ.
ಮೊನ್ನೆ ನಡೆದ ದಾಳಿಯಲ್ಲಿ 76 ಮಂದಿ ಸಾಯಲು ಪ್ರಮುಖ ಕಾರಣ ನಮ್ಮ ಸೈನಿಕರಿಗೆ ಸೂಕ್ತವಾದ ತರಬೇತಿ ಸಿಗದೇ ಇರುವುದು.ಅಲ್ಲಿನ ಭೌಗೋಳಿಕ 
ವೈಪರೀತ್ಯಗಳೂ ಒಂದು ಕಾರಣವಾಗಿರಬಹುದು. ಇದಕ್ಕೆಲ್ಲಾ ಪರಿಹಾರ ಅಂದ್ರೆ ಸ್ಥಳೀಯರನ್ನೇ ಭಯೋತ್ಪಾದಕರನ್ನು ಮಟ್ಟ ಹಾಕುವ ಕಾರ್ಯಕ್ಕೆ ನೇಮಕ ಮಾಡುವ ’Salwa Judum’ ಅನ್ನು ಇನ್ನೂ ಹೆಚ್ಚಾಗಿ ಬೆಳೆಸಬೇಕು. ನಮ್ಮ ಸೈನಿಕರಿಗೆ ಇನ್ನೂ ಉತ್ತಮ ತರಬೇತಿ ಸಿಗುವಂತಾಗಬೇಕು. ಗುಣಮಟ್ಟದ ಆಯುಧಗಳನ್ನ ಪೂರೈಸಬೇಕು. ಎಲ್ಲದಕ್ಕಿಂತಾ ಮುಖ್ಯವಾಗಿ ಸರ್ಕಾರಗಳು,ಈ ಮಾವೋವಾದಿಗಳ ಬಗ್ಗೆ ವಿನಾಕಾರಣ ಕರುಣೆ ತೋರುವ ಕಾರ್ಯವನ್ನು ಈಗಲಾದರೂ ಬಿಡಬೇಕಾಗಿದೆ. ಈ ನಿಟ್ಟಿನಲ್ಲಿ ನಮ್ಮನ್ನಾಳುವ ರಾಜಕೀಯ ಧುರೀಣರು ಕಾರ್ಯಪ್ರವ್ರುತ್ತರಾಗಬೇಕಾಗಿದೆ.
ಕೊನೆಯದಾಗಿ ಒಂದು ಪ್ರಶ್ನೆ, ಪ್ರಶ್ನೆಯಾಗಿಯೇ ಉಳಿದುಬಿಡುತ್ತದೆ- ಬೆಕ್ಕಿಗೆ ಗಂಟೆ ಕಟ್ಟುವರ್ಯಾರು? ಮತ್ತೆ ಬಿಡುವಾದಾಗ ಸಿಗ್ತೀನಿ.